ಕೀರ್ತನೆ - 512     
 
ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ 1 ನಾಲಿಗೆಯಿದ್ದ ಕೈಯಲಿ ನಾರಾಯಣನೆನ್ನಿರೊ ಕದ್ದು ಹುಸಿಯನಾಡಿ ಅಪಾರ । ಬುದ್ಧಿಯಿಂದ ಕೆಡಲು ಬೇಡಿ | ಬುದ್ಧಿವಂತರಾಗಿ -ಅನಿ | ರುದ್ಧನ ನೆನಯಿರೊ ನಿತ್ಯವಿಲ್ಲ ನೇಮವಿಲ್ಲ | ಮತ್ತೆ ಧಾನಧರ್ಮವಿಲ್ಲ | ವ್ಯರ್ಥವಾಗಿ ಕೆಡದೆ ಪುರು | ಷೋತ್ತಮನೆನ್ನಿರೊ ಭಕ್ತಿಕೊಡುವ ಮುಕ್ತಿಕೊಡುವ | ಮತ್ತೆ ಸಾಯುಜ್ಯ ಕೊಡುವ ॥ ಕರ್ತೃ ಪುರಂದರವಿಠಲನ | ನಿತ್ಯ ನೆನೆಯಿರೊ