ಕೀರ್ತನೆ - 513     
 
ಗುರುವಿನ ಒಲುಮೆಯು ಆಗುವ ತನಕ । ದೊರೆಯದಣ್ಣ ಮುಕುತಿ ಪರಿಪರಿ ಶಾಸ್ತ್ರವನೇಕವನೋದಿ । ವ್ಯರ್ಥವಾಯಿತು ಭಕುತಿ ಆರು ಶಾಸ್ತ್ರಗಳನೋದಿದರೇನು । ಮೂರಾರು ಪುರಾಣವ ಮುಗಿಸಿದರೇನು | ಸಾರಿ ಸಜ್ಜನರ ಸಂಗವ ಮಾಡದೆ । ಧೀರನಾಗಿ ತಾ ಮೆರೆದರೇನು ಕೊರಳೊಳು ಮಾಲೆಯ ಧರಿಸಿದರೇನು | ಕರದಲಿ ಜಪಮಣಿ ಎಣಿಸಿದರೇನು || ಮರುಳನಂತೆ ತಾ ಶರೀರಕೆ ಬೂದಿಯ | ಒರಸಿಕೊಂಡು ತಾ ತಿರುಗಿದರೇನು ನಾರಿಯರ ಸಂಗವ ಅಳಿದರೇನು! ಶರೀರಕೆ ದುಃಖವ ಪಡಿಸಿದರೇನು! ಮಾರನಯ್ಯ ಶ್ರೀ ಪುರಂದರವಿಠಲನ । ಮರೆಯದೆ ಮನದೊಳು ಬೆರೆಯುವತನಕ