ಕೀರ್ತನೆ - 735     
 
ಕೆಟ್ಟೆನೆಂದೆನಲೇಕೋ ಕ್ಷೇಶ ಪಡುವದೇಕೋ ಗೇಣು ಹೊಟ್ಟೆಗಾಗಿ ಪರರ ಕಷ್ಟ ಬಡಿಸಲೇಕೋ ಹುಟ್ಟಿಸಿದ ದೇವ ಹುಲ್ಲು ಮೇಯಿಸುವವನಲ್ಲ ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ ಗಟ್ಟಾಗಿ ಸಲಹುವ ಪುರಂದರವಿಠಲ,