ಬಾರೊ ಬಾರಯ್ಯ ಮನೆಗೆ, ಭಾವಜನಯ್ಯ
ಬಾರದಿದ್ದರೆ ಎನ್ನ ಮನವು ನಿಲ್ಲದೊ ರಂಗ
ಅತ್ತಿಗೆ ಮೈದುನ ಬಾರೊ ಅತ್ತಿಗೆ ಮಗಳ ಗಂಡ
ಅತ್ತಿಗೆ ಮ್ಯಾಲತ್ತಿಗೆ ಮಗಳ ಸೊಸೆಯ ಗಂಡ
ಮಾವನ ಮಗ ಬಾರೊ ...ನಣುಗ ಮಾವನ
ಮಡದಿಯ ಮಗಳ ಸೊಸಿಯ ಗಂಡ
ಅಂಬುಧಿಶಯನನೆ ಬಾರೊ ಆದಿ ಮೂರುತಿ ರಂಗ
ಕಂಬದೊಳು ನೆಲಸಿದ ಆದಿಕೇಶವರಾಯ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು