ಬಾ ರಂಗ ಎನ್ನ ಮನಕೆ ಭಾವಜನಯ್ಯ
ಭಾವಮೈದುನ ಭಾವ ಬೀಗನ ತನುಜ
ಮಾವನ ಮಡದಿಯ ಮೊಮ್ಮಗಳ ಗಂಡ
ಅತ್ತೆ ಮೈದುನ ಬಾರೊ ಅತ್ತೆಯ ಮಗಳ ಗಂಡ
ಅತ್ತಿಗೆ ಮೇಲತ್ತಿಗೆ ಮಗಳ ಗಂಡ
ಅಂಬುಜನಯ್ಯ ಬಾರೋ ಆದಿಮೂರುತಿ ರಂಗ
ಕಂಬದಿಂದೊಡೆದು ಬಂದ ಆದಿಕೇಶವ ರಂಗ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು