ಕೀರ್ತನೆ - 265     
 
ಬಲ್ಲವರು ನೀವು ಪೇಳಿರಯ್ಯ ಭಾವದುಭಯಾರ್ಥವಿದು ಎಲ್ಲರಿಗೆ ಸುಸಮ್ಮತವಾದುದೀ ನಾಮ ಚಿತ್ತ ನಕ್ಷತ್ರದಲಿ ಪುಟ್ಟಿದಾತನ ಸೊಸೆ ಮೃತ್ಯುವೆಂದೆಣಿಸಿ ಹೊರಡಿಸಿದಾತನ ಉತ್ತರಾಯಾಣ ಮಾವನ ಮಗಳಿಗಳುಪಿದವನ ಹೊತ್ತು ಹೋಗದು ಎನಗೆ ತೋರೆ ತರಳಾಕ್ಷಿ ಅತ್ತ ಅಣ್ಣನ ಅಗ್ರಜನ ಕೈಯಿಂದ ಬತ್ತಲೆಗನ ಕರೆತರಿಸಿ ಒಲಿಸಿಕೊ೦ಡನ ಉತ್ತ ಹೊಲದಿ ವೈದರ್ಭನಹನ ತಂಗೆಯ ಕೊ೦ಡು ಮುತ್ತೈದೆ ಮಾಡಿ ಮೊಮ್ಮಗನ ಪಡೆದವನ ಉರಿಯ ಆಸರ ಕಳೆಯಲು ನೆರವಿತ್ತಾತನ ಧರೆಯೊಳಗೆ ಮೂವರನು ಗೆಲಿದು ಭೂರಿ ವಾರ್ತೆಯ ಪಡೆದ ಮಹಾ ಮಹಿಮನ ತೋರೆನಗೆ ಕಾಗಿನೆಲೆಯಾದಿಕೇಶವನ