ಕೀರ್ತನೆ - 260     
 
ಕಾವನಯ್ಯನ ಕಳುಹು ರಮಣಿ ಕೋವಿದರು ಪಡೆದ ಬಡದಾದಿಕೇಶವನ ಚ೦ದ್ರವಂಶದ ರಾಯನನುಜ ಸಖನಾದವನ ಚ೦ದ್ರವೈರಿಯ ಮೇಲೆ ಪವಳಿಸಿದನ ಚ೦ದ್ರಮನ ಸೋದರಿಯ ಕೈಯ ಪಿಡಿದಂಥವನ ಚ೦ದ್ರದಾಮನ ಮನೆಗೆ ಕಳುಹೆ ಕಮಲಾಕ್ಷಿ ಕಮಲನಾಭನ ಕಮಲ ಸಖ ಕೋಟಿ ತೇಜನ ಕಮಲ ಕೋರಕದಿ ಜನಿಸಿದನಯ್ಯನ ಕಮಲವನು ಕರದಲ್ಲಿ ಪಿಡಿದಿಹನ ಬೇಗದಲಿ ಕಮಲ ವದನನ ಮನೆಗೆ ಕಳುಹೆ ಕಮಲಾಕ್ಷಿ ಬಾಲತನದಲಿ ಬಹಳ ಅಸುರರನು ಸೀಳಿದನ ಲೀಲೆಯಿಂದಲಿ ಭಕ್ತರನು ಸಲಹುತಿಹನ ನೀಲ ಮೇಘ ಶ್ಯಾಮ ಭಾಗ್ಯಪುರದಲಿ ನಿಂದ ಶ್ರೀಲತಾಂಗಿಯ ರಮಣ ಆದಿಕೇಶವನ