ಕೀರ್ತನೆ - 259     
 
ಕರೆತಾರೆ ಕಾಮಿನಿ ಕಮಲಜಪಿತನ ಹರಿಯ ತೋರೆ ಸಾಸಿರ ನಾಮವುಳ್ಳವನ ಮರೆದಿರಲಾರೆನೆನ್ನ ಪ್ರಾಣವಲ್ಲಭ - ದಿನ ಕರಕೋಟಿ ಕಿರಣ ಪ್ರಕಾಶವುಳ್ಳವ ಬ್ರಹ್ಮ ಕಪಾಲವ ಧರೆಗಿಳುಹಿದನ ತಮ್ಮ ಅಣ್ಣರನು ಕಡಿದಾಡಿಸಿದವನ ................................................ .............................................. ನಗರಾಜವೈರಿಯ ಮಗನ ಬೀಗನ ನಗವ ಬೆನ್ನಲಿ ಪೊತ್ತು ಜಗವನಾಳುವನ ನಗವ ಕಿತ್ತವನ ಶಿರವ ಹರಿದವನ ನಗಸುತಾ ಪತಿ ಕಾಯದೊಳು ಮೂಡಿಹನ ಪಾತಾಳಕಿಳಿದು ಭೂಮಿಯನೊಯ್ದ ಘೋರ ಕಿ- ರಾತನನಟ್ಟಿ ಸತಿಯ ಗೆದ್ದವನ ಮಾತು ಕದ್ದವನ ಕುಕ್ಷಿಯ ಸೀಳಿದವನ ಮಾತೆಗೆ ಮಾತು ಕೊಟ್ಟವನ ಮಾವನ ಬೇಗ ಕಣ್ಣಿಂದ ಕೇಳುವನ ಹಗೆಯನಾಳುವವನ ಕಣ್ಣಿಂದ ತಿಳಿದು ಕಲ್ಪಿಸದವನ ಕಣ್ಣನಿರಿದು ದಾನವ ಬೇಡಿದವನ ಅಣ್ಣಗಳ ಕಂಗಳ ಕಾಲಲೊತ್ತಿದನ ಮಂದರಗಿರಿಯ ಕುಗುರದೆ ಎತ್ತಿದವನ ಬೆಂದು ಹೋದಾವೆಂದು ಗೋವ ಕಾಯ್ದವನ ಮಂದೆಗಾಯ್ದವನ ಮನ್ಮಥನ ಪೆತ್ತವನ ತಂದೆ ಬಾಡದ ಬಾಡದಾದಿಕೇಶವನ