ಕೀರ್ತನೆ - 258     
 
ಏನೆ ಮನವಿತ್ತೆ ಲಲಿತಾಂಗಿ ಅಸ ಮಾನ ಗೋವಳ ಕುಲವಿಲ್ಲದವನೊಳು ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ ಅಳಿಯಗಳಿಯನಾದ ಮಗಳ ಮಗಗೆ ಮೈದುನನಾಗಿ ಮಾವನ ಜಗವರಿಯಲು ಕೊಂದ ಕುಲಗೇಡಿ ಗೋವಳ ಅತ್ತೆಗೆ ವಲ್ಲಭನಾದ ಭ್ರುತ್ಯರಿಗಾಳಾದ ಚಿತ್ತ ಒಲಿದು ಚೆನ್ನ ಆದಿಕೇಶವನೊಳು