ಕೀರ್ತನೆ - 132     
 
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ ಅಚ್ಯುತನ ನಾಮವನು ನೆನೆದು ಸುಖಿಯಾಗೊ ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು ಗಳಿಸದಿರು ನೀ ದುರಿತರಾಶಿಗಳನು ನಳಿನನಾಭನ ದಿವ್ಯ ನಾಮವನು ನೆನೆನೆನೆದು ನೆಲೆಯಾದ ಪರಮ ಪದವಿಯ ಪಡೆಯೊ ಮನವೆ ನೋಡದಿರು ಪರಸತಿಯ ಕೂಡದಿರು ದುರ್ಜನರ ಆಡದಿರು ಮಾತುಗಳ ಗರ್ವದಿಂದ ಬೇಡದಿರು ಕೈ ಯ ಹಿಂದೆಗೆವ ಲೋಭಿಯನು, ಕೊಂ- ಡಾಡದಿರು ಬೀದಿಗೂಳುಂಬ ದೈವಗಳ ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದು ಮಾನಕ್ಕೆ ಮೆಚ್ಚಿ ನೀ ಮರುಳಾಗದೆ ಜಾಣತನದಿ೦ ಕಾಗಿನೆಲೆಯಾದಿಕೇಶವನ ಮಾನಸದಲಿ ನೆನೆದು ಸುಖಿಯಾಗು ಮನುಜ