ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆ
ನಿಗಮಗೋಚರ ಮುಕುಂದ
ಗಾನರಸಲೋಲ ಆಗಮಶೀಲ ಭಕ್ತಪರಿಪಾಲ
ಸನ್ನುತ ಗೋಪಾಲ ಬಾಲ
ಜಪತಪಾನುಷ್ಠಾನ ಜಪಿತನೆಂದೆನಿಸುವೆನೆ
ಅಪ್ಪ ಜಾಣತನವೆನ್ನೊಳಿಲ್ಲ
ಗುಪಿತದಿ೦ ದಾನ ಧರ್ಮವನು ನಾ ಮಾಡುವೆನೆ
ಅಪರಿಮಿತ ಧನವು ಇಲ್ಲ
ಅಪಾರ ಕರ್ಮಗಳ ಅನುಸರಿಸಿ ನಡೆವುದಕೆ
ನಿಪುಣತ್ವ ಮೊದಲೆ ಇಲ್ಲ
ರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆ
ಸುಪವಿತ್ರ ನೀನಲ್ಲದೆ ಇಲ್ಲ - ಸಿರಿನಲ್ಲ
ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲು
ಮೌನದಿಂ ಬಂದು ಕಾಯ್ದೆ
ಹೇ ನಾರಗಾ ಎ೦ದಜಮಿಳಗೆ ಮುಕ್ತಿಯನು
ನೀನೊಲಿದು ಕೃಪೆ ಮಾಡಿದೆ
ಹಾನಿಯಿಲ್ಲದ ಪದವಿ ನೀನಿತ್ತು ದ್ರುವಗೆ ಕಡು
ದೀನತ್ವವನು ಬಿಡಿಸಿದೆ
ದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿ
ಮಾನಿ ಎನ್ನನೂ ಸಲಹದೆ - ಬರಿದೆ
ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡು
ಬೇಸರದಿ ಮನದಿ ನೊಂದು
ಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾ
ಫಾಸಿ ಪಡಲಾರೆನಿಂದು
ವಾಸುದೇವನೆ ನಿನ್ನ ಹೊಂದಿ ಬದುಕುವೆನೆಂದು
ಆಸೆ ಪಡುತಿಹೆನು ಇಂದು
ದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿ
ಕೇಶವನೆ ಕರುಣಿಸಯ್ಯಾ ಬಂದು
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ