ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆ
ಎನ್ನ ಮನಸು ನಯನ ಸುಪ್ರ
ಸನ್ನವಾಯಿತು ದಯವ ಮಾಡಿ
ಮುನ್ನ ಸಲಹಬೇಕು ಸ್ವಾಮಿ
ಪಕ್ಷಿವಾಹನ ಲಕ್ಷ್ಮೀರಮಣ
ರಾಕ್ಷಸಾಂತಕ ಯದುಕುಲಾನ್ವಯ
ಕುಕ್ಷಿಯೊಳು ಬ್ರಹ್ಮಾಂಡ ತಂಡವ
ರಕ್ಷಿಸುತಲಿಹ ಸುಜನ ಪಕ್ಷಾ
ದೇಶದೇಶ ತಿರುಗಿ ನಾನು
ಆಶೆಭರಿತನಾದೆ ಸ್ವಾಮಿ
ವಾಸಿ ನಿಮಗೆ ಸಲಹುವುದು ಜಗ
ದೀಶ ಕಾಯೋ ವಾಸುದೇವ
ಕ೦ತು ಜನಕ ಎನ್ನ ಮೊರೆಯ
ನಾಂತು ವಿಹಿತದಿಂದ ಸೇವೆ
ಅ೦ತರವಿಲ್ಲದೆ ದಯಪಾಲಿಸೊ
ಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ