ಕೀರ್ತನೆ - 96     
 
ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ಎಡರಿಗಾಗುವರಿಲ್ಲ ಕಡನ ನ೦ಬುವರಿಲ್ಲ ಬಡವನೆಂದು ವಸ್ತ್ರವ ಕೊಡುವರಿಲ್ಲ ದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವು ಒಡೆಯ ಕಂಡೂ ಕಾಣದಿರುವುದುಚಿತವಲ್ಲ ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲ ಪರಮಾತ್ಮ ನಿನ್ನೊಳಗೆ ನಾನರಿತಿಲ್ಲ ಬೆರೆತುಕೊಂಡಿರಲು ಸಜ್ಜನರ ಗೆಳತನವಿಲ್ಲ ಪರಮಹಂಸನೆ ಹರಿಸೊ ಇಂಥ ಕೊರತೆಗಳಲ್ಲ ನೀಲವರ್ಣದ ಲೋಲ ಕಾಲನವರಿಗೆ ಶೂಲ ಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲ ನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತು ಪಾಲಿಸೋ ಶ್ರೀ ಕಾಗಿನೆಲೆಯಾದಿಕೇಶವ