ಕೀರ್ತನೆ - 97     
 
ಏನಿದೆತ್ತಣ ಬಯಕೆ ಎಲೊ ಮಂಕು ಜೀವ ನೀನು ಅರಿತರೆ ಪೇಳು ನಿಜವನೆನಗೆ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲು ನಂಟರೈ ವರು ಕೂಡಿ ಆಕ್ರಮಿಸುತಿಹರು ದಾಂಟುವುದು ಅಸದಳವೊ ಎರಡೊಂದು ಬಲೆಗಳಲಿ ಕಂಟಕದಿ ಬಲು ತಾಪದಿಂದ ಬಳಲುವರು ಆರೆರಡು ದಂತಿಗಳು ದಾರಿಯೊಳು ನಿಂತಿಹವು ಆರು ಮೂರು ತುರುಗಗಳು ದಾರಿಯನು ಕೊಡವು ಮೂರೆರಡನೀಡಾಡಿ ತೋರುವುದು ಎನ್ನಾಣೆ ಸಾರಿ ಎನೇನಹುದು ಎಂಬುದನು ನೋಡು ಪರರನು ನಿಂದಿಸದೆ ಪರಯೋಗ್ಯ ನೀನಾಗಿ ಪರರ ಪಾಪಗಳ ನೀ ಕಟ್ಟಿಕೊಳದೆ ಪರಮಾತ್ಮ ಕಾಗಿನೆಲೆಯಾದಿಕೇಶವರಾಯ ಪರಹಿತಕೆ ಸಖನೆಂದು ಭಜಿಸೆಲೊ ಮನುಜ