ಕೀರ್ತನೆ - 87     
 
ಇರಬಂದುದಿಲ್ಲ ಸಂಸಾರ - ಇದನರಿತು ಸಿರಿಹರಿಯ ಭಜಿಸುವುದು ಸಾರ ಧರೆಯನಾಳಿದ ತ್ರಿಶ೦ಕು ದೊರೆಯು ತಾನೆಲ್ಲಿ ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿ ಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿ ಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿ ಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿ ಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ ದಶರಥ ಮೊದಲು ಷೋಡಶ ರಾಯರುಗಳೆಲ್ಲಿ ಅಸಹಾಯ ಶೂರ ವೀರ ವಿಕ್ರಮರೆಲ್ಲಿ ಅಸಮಬಲ ವಸುಮತಿಯ ಹಿರಣ್ಣಾಕ್ಷನೆಲ್ಲಿ ವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿ ಕುಸುಮ ಬಾಣನ ಪಡೆದ ದೇವ ತಾನೆಲ್ಲಿ ಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟು ಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟು ಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟು ಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟು ಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟು ಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ