ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿ೦ದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀರಂಗಶಾಯಿ
ಎಂಟು ಏಳನು ಕಳೆದುದರಿಂದ
ತುಂಟರೈವರ ತುಳಿದುದರಿಂದ
ಕಂಟಕನೊಬ್ಬನು ಅಳಿದುದರಿಂದ
ಭಂಟನಾಗಿ ಬಂದೇ ಶ್ರೀರಂಗಶಾಯಿ
ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಫನಶೋಭಿತನೆ ಶ್ರೀರಂಗಶಾಯಿ
ವಜವೈಢೂರ್ಯ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾ೦ತಕ ಶ್ರೀರಂಗಶಾಯಿ
ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ನಾರದರ ಕಂಡೆ
ಅ೦ಬುಜೋದ್ಧವ ಪ್ರಮುಖರ ಕಂಡೆ
ಶ೦ಬರಾರಿ ಪಿತನೆ ಶ್ರೀರಂಗಶಾಯಿ
ನಾಗಶಯನನ ಮೂರುತಿ ಕಂಡೆ
ಭೋಗಿ ಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ