ಕಂಡೆ ಶ್ರೀಹರಿ ದಿವ್ಯಪಾದ - ಬ್ರ-
ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ
ಸಿರಿಯು ಸೇವಿಪ ವರ ಪಾದ - ನಮ್ಮ
ಗರುಡನಿಂದ ಹೊತ್ತು ತಿರುಗುವ ಪಾದ
ತರಳ ಧ್ರುವನ ಕಾಯ್ದ ಪಾದ - ಮುನಿ
ಸುರರು ನಮಿಸುವ ಲಲಿತ ಪಾದ
ಸರಸಿಜೋದ್ಭವ ವಂದ್ಯ ಪಾದ
ಪುರಹರ ನಮಿತ ಪರಿಪೂರ್ಣ ಪಾದ
ನರಗೆ ಸಾರಥಿಯಾದ ಪಾದ
ಕೌರವ ಮೂಲ ಮುರಿದಿಟ್ಟ ಪಾದ
ದಿವಿಜರಾಜನಿಗೊಲಿದ ಪಾದ
ಅವಿವೇಕಿ ದಾನವರ ಕೊಂದ ಪಾದ
ಬುವಿ ಗಯಾಪುರ ಶ್ರೇಷ್ಠ ಪಾದ
ಭವ ಹಿಂಗಿಪಾದಿಕೇಶವ ಪಾದ
Music
Courtesy:
ಸ್ಥಲ -
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ