ಕೀರ್ತನೆ - 1431     
 
ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದ ಕಾಲದಲ್ಲಿ | ಶ್ರೀದೇವಿಯರು ಶ್ರೀ ಭೂ ದುರ್ಗಾ ರೂಪದಿ ನಿಂದು | ದಕ್ಷಿಣಾ ಯಜ್ಞ ನಾಮದಿಂದ ವೇದಂಗಳಿಂದ ಕೊಂಡಾಡುವ ಮುಖ್ಯಾಭಿಮಾನಿಯಾಗಿ । ವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದ | ನುತಿಸುವಳು ಆ ಆ ಆ ತ್ರಿ ಪ್ರಕಾರ । ಮಿತಿಯೆಂದು ಬೊಮ್ಮನ ನೂರರೊಳೆಂಟು ಭಾಗ । ದೊಳೊಂದು ಭಾಗ ವೀ ಲಕುಮಿ ದೇವಿಗೆ । ತಾ ಪ್ರೇರಿಸಲಾಗಿ ನುತಿಸುವಂದದಿ ಪ್ರೇರಕನಾಗಿ ಪ್ರಾರ್ಥನೆ ಕೈಕೊಂಡು | ತಮ್ಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ ನಿರೂಪಿಸಿದನು ಪುರಂದರ ವಿಠಲ