ಕೀರ್ತನೆ - 1430     
 
ಇಲ್ಲೆಂಥಾ ಸುಖಗಳುಂಟೋ ಅಲ್ಲಂಥ ಸುಖಗಳುಂಟು ದುಃಖ ಮಿಶ್ರವಾದ ಸುಖ ಇಹಲೋಕದಲ್ಲಪ್ಪುದು ನಾಶವುಂಟು ದಿನಕೊಂದು ಬಗೆ ಬಗೆಯಾದಂಥ ಸುಖವಾಗಿ ನಾಶವಿಲ್ಲದ ಅಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು ಆಂದೋಳಿಕ ಛತ್ರ ಚಾಮರ ಸದಾಪೀತಾಂಬರ ಶಂಖ ಚಕ್ರಗಳಿಂದೊಪ್ಪುತ ಪುರಂದರ ವಿಠಲನ ಭಜಿಸಲೆ ಜೀವ.