ಕೀರ್ತನೆ - 1429     
 
ನರವೃಂದವೆಂಬೊ ಕಾನನದಲ್ಲಿ ಶ್ರೀ ಹರಿ ನಾಮವೆಂಬಂಥಾ ಕಲ್ಪವೃಕ್ಷ ಹುಟ್ಟಿತಯ್ಯ ನೆರಳು ಸೇರಲುಂಟು ಫಲವು ಮೆಲ್ಲಲುಂಟು ಒರೆವ ನಾಲಗೆಯಲಿ ನಾಮತ್ರಯಂಗಳುಂಟು ಇದೇ ಮುನಿಜನರ ಮನೆಯ ಕೊನೆಯ ಠಾವೊ ಇದೇ ಬ್ರಹ್ಮಾದಿಗಳ ಸದಮಲ ಹೃದಯ ಪೀಠ ಇದೇ ದ್ವಾರಾವತಿ. ಇದೇ ಕ್ಷೀರಾಂಬುಧಿ ಇದೇ ಪುರಂದರವಿಠಲನ ವೈಕುಂಠ ಮಂದಿರ.