ಕೀರ್ತನೆ - 1402     
 
ಹರಿ ಸಿರಿ ಚರಣವಿರಲು ಮಿಕ್ಕ ಭೂರಿ ದೈವಗಳೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿಯ ತೀರದಲ್ಲಿದೆ ಕೆರೆಯನೀರ ಕುಡಿವ ಮಾನವರುಂಟೆ ತಾರುಣ್ಯವಿರಲು ವೈಕುಂಠ ವಿಠಲರೇಯನ ತಿರುವೇಂಗಳಪ್ಪ ಸಿರಿ ಪುರಂದರ ವಿಠಲನ.