ಕೀರ್ತನೆ - 1401     
 
ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗ ಅನೇಕ ಬಂಧುಗಳು ಲಕ್ಷ ವೈದ್ಯರುಗಳು ಇರಲಾಗಿ ಕಣ್ಣಕಣ್ಣ ಬಿಡುವರು ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು ಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ.