ಕೀರ್ತನೆ - 1369     
 
ಇಲ್ಲದಿದ್ದರೆ ಚಿಗುರು ತುಳಸಿ ಅದು | ಇಲ್ಲದಿದ್ದರೆ ಮುಗುಳು ತೆನೆಯು ಅದು । ಇಲ್ಲದಿದ್ದರೆ ತುಳಸಿ ಎಲೆಯು ಅದು । ಇಲ್ಲದಿದ್ದರೆ ಒಣಗಿದ ಕಾಷ್ಟ ಅದು | ಇಲ್ಲದಿದ್ದರೆ ತುಳಸಿಯ ಬುಡದ ಮಣ್ಣು ಅದು । ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ ನಮ್ಮ ಪುರಂದರ ವಿಠಲ ಒಲಿವ ಕಾಣಿರೊ