ಹರಿಸರ್ವೋತ್ತಮನೆಂಬ ಹಿರಿಯ ಪುತ್ರನಿರಲಾಗಿ ಈ
ನರಪುತ್ರರಿಂದ ಆಹೋದೇನಯ್ಯ
ಪದ್ಮನಾಭನೆಂಬ ದೊಡ್ಡ ಪುತ್ರನಿರಲಾಗಿ
ಈ ದಡ್ಡ ಪುತ್ರರಿಂದಲಿ ಆಗುವ ಗತಿಯೇನಯ್ಯ
ಶ್ರೀ ಕೇಶವನೆಂಬ ಜೇಷ್ಠ ಪುತ್ರ ನಿರಲಾಗಿ
ಈ ನಷ್ಟ ಪುತ್ರರಿಂದಾಗುವ ಸ್ಥಿತಿಯೇನಯ್ಯ
ಪುರಂದರ ವಿಠಲನೆಂಬ ಪುಣ್ಯ ಪುತ್ರನಿರಲಾಗಿ
ಈ ಅನ್ಯ ಪುತ್ರರಿಂದಲಿ ಆಗುವ ಮತಿಯೇನಯ್ಯ.