ಹರಿಸರ್ವೋತ್ತಮನೆಂಬ ಹಿರಿಯ ಪತ್ರನಿರಲಿಕ್ಕೆ
ನರಪುತ್ರನಿಂದಾಗುವ ಗತಿ ಯಾವುದಯ್ಯ
ಸೃಷ್ಟಿಕರ್ತನೆಂಬ ಶ್ರೇಷ್ಠ ಪುತ್ರನಿರಲಿಕ್ಕೆ
ದುಷ್ಟ ಪುತ್ರನಿಂದ ಆಗುವ ಗತಿ ಯಾವುದಯ್ಯ
ನಾರಾಯಣನೆಂಬ ನಾಮ ಪುತ್ರನಿರಲಿಕ್ಕೆ
ಕಾಮಪುತ್ರನಿಂದ ಆಗುವ ಗತಿ ಯಾವುದಯ್ಯ
ಪುರಂದರ ವಿಠಲನೆಂಬ ಪುಣ್ಯ ಪುತ್ರ ನಿರಲಿಕ್ಕೆ
ಅನ್ಯ ಪುತ್ರರಿಂದ ಆಗುವ ಗತಿ ಯಾವುದಯ್ಯ.