ಕೀರ್ತನೆ - 1289     
 
ಹರಿಯೆಂಬೋದು ಲಗ್ನ ಬಲವು ಹರಿಯೆಂಬೋದೆ ಸುದಿನ ಬಲವು ಹರಿಯೆಂಬೋದೆ ತಾರಾ ಬಲವು ಹರಿಯೆಂಬೋದೆ ಚಂದ್ರ ಬಲವು ಹರಿಯೆಂಬೋದೆ ವಿದ್ಯಾ ಬಲವು ಹರಿಯೆಂಬೋದೆ ದ್ರವ್ಯ ಬಲವು ಹರಿಲಕ್ಷ್ಮೀಪತಿ ಪುರಂದರ ವಿಠಲನೆ ಬಲವಯ್ಯ ಸರ್ವ ಸುಜನರಿಗೆ.