ಹೃದಯದ ಮಲವನ್ನು ತೊಳೆಯಲರಿಯದೆ ತಾವು
ಉದಯದಲೆದ್ದು ಮಿಂದು ಗದಗದ ನಡಗುವರು
ಅದರಿಂದೇನು ಫಲ? ಅದಕ್ಕಿಂತ
ಉದಯಾಸ್ತಮಾನ ನೀರೊಳಗಿದ್ದ ಮುದಿಕಪ್ಪೆ ಮಾಡಿದ ತಪ್ಪೇನಯ್ಯ?
ಪುರಂದರವಿಠಲನ ನಾಮವ ನೆನೆಯದೆ
ದಿನಕೆ ಇನ್ನಾರುಬಾರಿ ಮುಳುಗಿದರೇನಯ್ಯಫಲವು.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಲೋಕನೀತಿ