ಕೀರ್ತನೆ - 1065     
 
ಅಚ್ಯುತಾನಂತಗೋವಿಂದ ಮುಕುಂದ | ವಾಮನ ವಾಸುದೇವ ನಾರಾಯಣ ಹರಿ | ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ । ಪರಂಧಾಮ ನಾರಾಯಣ । ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ | ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ | ಅವತಾರ ಅನಂತಾವತಾರ ನಾರಾಯಣ | ಹರಿ ಅಚ್ಯುತಾನಂತ ಗೋವಿಂದ । ಅಪಾರ ಮಹಿಮ ಶ್ರೀ ನಾರಾಯಣ ಅಹೋ । ಸರ್ಪಶಯನನೆ ನಾರಾಯಣ | ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ | ಎನ್ನಪ್ಪ ನೀ ನಾರಾಯಣ