ಕೀರ್ತನೆ - 1016     
 
ಅನಂತ ಮುಕುಟ ಅನಂತ ಶಿರಸ್ಸು ಅನಂತ ನಯನ । ಅನಂತ ನಾಸಿಕ ಅನಂತ ಕರಣ ಅನಂತ ಕಂಬು | ಅನಂತ ಓಷ್ಠ ಅನಂತ ವದನ ಅನಂತ ರದನ | ಅನಂತ ಕಂಠ ಅನಂತ ಅನಂತ ಬಾಹು । ಅನಂತ ವಕ್ಷ ಅನಂತ ಶ್ರೀ ತುಲಸಿ | ವೈಜಯಂತಿ ಮಾಲೆಯಿಂದೊಪ್ಪುವ । ಅನಂತ ನಾಭಿ ಅನಂತ ಉದರ ಅನಂತ ತ್ರಿವಳಿ | ಅನಂತ ಕಟಿಯು ಅನಂತ ಜಘನ ಅನಂತ ಊರು | ಅನಂತ ಜಾನು ಅನಂತ ಜಂಘ ಅನಂತ ಗಲ್ಲ ಅನಂತ ಪೆಂಡೆ | ಅನಂತ ಚರಣಂ ಅನಂತ ನಖವು | ಅನಂತ ಜಗಗಳ ಒಳಗೆ ಹೊರಗೆ ಇಪ್ಪ ಸಾನ್ನಿಧ್ಯ | ಪುರಂದರವಿಠಲನೊಬ್ಬನೆ ಕಾಣಿರೊ