ಕೀರ್ತನೆ - 1015     
 
ಸಾಸಿರ ನಾಮಕ್ಕೆ ಸಾಸಿರ ಮೂರುತಿ । ವಾಸುಕಿಶಯನನಾದ ಅನಂತ ಮೂರುತಿ | ಸಾಸಿರದಳದೊಳಡಗಿಹ ಮೂರುತಿ । ಶಾಶ್ವತ ನೆನೆವರ ಸಲಹುವ ಮೂರುತಿ । ಯಶೋದೆ ಮೊಲೆವುಂಡು ನಮ್ಮ ಪುರಂದರವಿಠಲ । ಅಸಮ ಕಾರುಣ್ಯಸಾಗರ ಮೂರುತಿ