ಕೀರ್ತನೆ - 999     
 
ಪರಿಪೂರ್ಣನು ನೀನು ಬೊಮ್ಮಾಂಡಕೋಟಿಗಳಿಗೆ ಎಂತೆಡೆಗೊಟ್ಟೆ ಹೇಳಾ? । ಪರಿಪೂರ್ಣನು ನೀನು ಲಕುಮಿದೇವಿಯರಿಗೆ ಎಂತೆಡೆಗೊಟ್ಟೆ ಹೇಳಾ | ಪರಿಪೂರ್ಣನು ನೀನು ಬೊಮ್ಮಾದಿ ಸುರರಿಗೆ ಎಂತೆಡೆಗೊಟ್ಟೆ ಹೇಳಾ? ॥ ಪರಿಪೂರ್ಣನು ನೀನು ಅವ್ಯಾಕೃತಾಕಾಶಕ್ಕೆ ಎಂತೆಡೆಗೊಟ್ಟೆ ಹೇಳಾ? ! ಪರಿಪೂರ್ಣನು ನೀನು ಪುರಂದರವಿಠಲ ಎಂತೆಡೆಗೊಟ್ಟೆ ಹೇಳಾ