ಕೀರ್ತನೆ - 847     
 
ತಾಯಿ ಲಕುಮಿ ತಂದೆ ವಿಠಲ | ದಾಯಿಗ ಚತುರಾನನ । ವಾಯು ತನುಜನು ರಕ್ಷಕನು ಸ- ಹಾಯಿಗಳು ದೇವತೆಗಳು | ಮಾಯಿ ಅವರ ಮನೆದೊತ್ತು ರಘು । ರಾಯನ ಡಿಂಗರಿಗರಿಗೆ ಏನಯ್ಯ । ಚತುರ್ದಶ ಭುವನಂಗಳಲ್ಲಿ | ಪ್ರತಿಕಕ್ಷೆಗಳಲ್ಲಿವರಿಗೆ | ಪುರಂದರವಿಠಲರಾಯನ ಶರಣರ ಭಾಗ್ಯವಿನ್ನೆಂತೊ