ಕೀರ್ತನೆ - 737     
 
ತಪ್ಪುರಾಶಿಗಳ ಒಪ್ಪಿ ಕಾಯೊ ಕೃಪಾಳು ಮುಪ್ಪುರವನಳಿದಂಥ ಮುನೀಂದ್ರವಂದ್ಯ ಅಪ್ರಮೇಯನೆ ನಿನ್ನ ಅದ್ಭುತ ಮಹಿಮೆಗಳ ಅಪ್ಪು ನಿಧಿಯಲ್ಲಿ ಪುಟ್ಟಿದವಳು ಬಲ್ಲಳೆ ಕಪ್ಪು ಮೇಘಕಾಂತಿಯೊಪ್ಪುವ ತಿಮ್ಮಪ್ಪ ಅಪ್ರಾಕೃತರೂಪ ಪುರಂದರವಿಠಲ