ಕೀರ್ತನೆ - 734     
 
ಕೆಟ್ಟೆನೆಂದೆನಲೇಕೆ ಕ್ಷೇಶಪಡುವುದೇಕೆ ಹೊಟ್ಟೆಗೋಸುಗ ಪರರ ಕಷ್ಟಪಡಿಸಲೇಕೆ ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು ಹುಟ್ಟಿಸಿದ ದೇವರು ಹುಲ್ಲುಮೇಯಿಸುವನೆ ಗಟ್ಟಿಯಾಗಿ ನೆರನಂಬು ಪುರಂದರವಿಠಲನ ಸೃಷ್ಟಿ ಮಾಡಿದ ಬ್ರಹ್ಮ ಸ್ಥಿತಿ ಮಾಡಲರಿಯನೇ?