ಮಂಗಳಂ ಜಯಮಂಗಳಂ
ವಾತಸುತ ಹನುಮನ ಒಡೆಯಗೆ ಮಂಗಳ
ದಾತ ಶ್ರೀ ರಘುಪತಿಗೆ ಮಂಗಳ ॥
ಸೇತುವೆಗಟ್ಟಿದ ರಾಯಗೆ ಮಂಗಳ
ಸೀತಾರಮಣಗೆ ಶುಭ ಮಂಗಳ
ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರ
ಹಲ್ಲ ಮುರಿದವಗೆ ಮಂಗಳ 1
ಕಲ್ಲಾದಹಲ್ಯೆಯನುದ್ಧಾರ ಮಾಡಿದ
ಬಲ್ಲಿದ ದಾಶರಥಿಗೆ ಮಂಗಳ
ಹರಧನು ಮುರಿದ ವಿನೋದಿಗೆ ಮಂಗಳ
ವರದ ತಿಮ್ಮಪ್ಪಗೆ ಮಂಗಳ
ಪುರಂದರವಿಠಲರಾಯಗೆ ಮಂಗಳ
ಸರುವೋತ್ತಮನಿಗೆ ಶುಭಮಂಗಳ