ಮಂಗಳಂ ಜಯ ಮಂಗಳಂ
ಅಕ್ರೂರವರದ ತ್ರಿವಿಕ್ರಮಗೆ
ನಕ್ರನ ಗೆಲಿದ ಪರಾಕ್ರಮಿಗೆ ॥
ಶಕ್ರನ ಗರ್ವವ ನಿರಸನ ಮಾಡಿದ
ಶುಕ್ರನ ಶಿಷ್ಯನಿಗೊಲಿದವಗೆ
ಗಂಗೆಯ ಪಡೆದ ಶ್ರೀರಂಗನಿಗೆ
ರಂಗು ಮಾಣಿಕದುಂಗುರದವಗೆ ॥
ಭೃಂಗಕುಂತಳೆಯರ ವ್ರತವನು ಕೆಡಿಸಿದ
ಅಂಗಜನಯ್ಯ ಶುಭಾಂಗನಿಗೆ
ಧರೆಯೊಳಗಧಿಕ ವೆಂಕಟಾಚಲದಿ
ಸ್ಥಿರವಹ ಪುಷ್ಕರಣಿಯ ತಟದಿ ॥
ಪರಮ ಪುರುಷ ಶ್ರೀ ಉರಗ ಗಿರಿಯ ದೊರೆ
ವರದ ಪುರಂದರವಿಠಲಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು