ಕೀರ್ತನೆ - 677     
 
ಮದ್ದು ಮಾಡಲರಿಯಾ ಮುದ್ದು ರಮಾದೇವೀ ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ವಚನಗಳೆಲ್ಲ ವಾಸುದೇವನ ಕಥೆಯೆಂದು ರಚನೆ ಮಾಡುವರಲ್ಲಿ ರಕ್ತಿ ನಿಲ್ಲುವ ಹಾಗೆ ಸಂತೆ ನೆರಹಿ ಸತಿ ಸುತರು ತನ್ನವರೆಂಬ ಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ ಎನ್ನೊಡೆಯ ಸಿರಿ ಪುರಂದರವಿಠಲನ ಸನ್ಮತಿಯಿಂದ ಹಾಡಿ ಪಾಡುವ ಹಾಗೆ