ಕೀರ್ತನೆ - 640     
 
ಹಿಗ್ಗುವೆಯೇಕೊ - ಏ ಮನುಜಾ ಹಿಗ್ಗುವೆಯೇಕೊ ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ ಅಗ್ನಿಯೊಳಗೆ ದಗ್ಧವಾಗುವ ದೇಹಕೆ ಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆ ಪತನವಾದಿಂದ್ರಿಯ ಪ್ರತಿಮೆಯ ದೇಹಕೆ ತೋರುವುದೊಂಬತ್ತು ದಾರಿಯ ಮಲವಾದ ನೀರಿಲ್ಲದಿದ್ದರೆ ನಾರುವ ದೇಹಕೆ ಆಗದ ಭೋಗವ ಆಗು ಮಾಡುತಲಿಪ್ಪ ರೋಗಬಂದರೆ ಬಿದ್ದು ಹೋಗುವ ದೇಹಕೆ ನರರ ಸೇವೆಯಮಾಡಿ ನರಕಭಾಜನನಾಗಿ ಮರಳಿ ಮರಳಿ ಹುಟ್ಟಿ ನರಳುವ ದೇಹಕೆ ಪುರಂದರವಿಠಲನ ಚರಣಕಮಲಕೆ ಎರಗದೆ ಇರುತಿಪ್ಪ ಗರುವಿನ ದೇಹಕೆ