ಕೀರ್ತನೆ - 639     
 
ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ | ದುರಿತಪರ್ವತ ಖಂಡಿಪುದು ವಜ್ರದಂತೆ ಮೇರು ಸುವರ್ಣದಾನವ ಮಾಡಲು ಪುಣ್ಯ ನೂರು ಕನ್ಯಾದಾನವ ಮಾಡಲು || ಧಾರಿಣಿಯೆಲ್ಲವ ಧಾರೆಯ ನೆರೆಯಲು || ನಾರಾಯಣ ಸ್ಮರಣೆಗೆ ಸರಿಬಹುದೆ ? ಹತ್ತುಲಕ್ಷ ಗೋದಾನ ಮಾಡಲು ಪುಣ್ಯ - 1 ವ್ರತಗಳ ಅನುದಿನ ಆಚರಿಸಲು || ಶತಕೋಟಿ ಯಜ್ಞವ ಮಾಡಲು ಲಕ್ಷ್ಮೀ – 1 ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ ಗಂಗೆ ಕಾಳಿಂದಿ ಗೋದಾವರಿ ಕಾವೇರಿ । ತುಂಗಭದ್ರೆಯಲಿ ಸ್ನಾನವ ಮಾಡೆ || ಮಂಗಳಮೂರುತಿ ಪುರಂದರವಿಠಲ । ರಂಗನ ಸ್ಮರಣೆಗೆ ಸರಿಯೆನ್ನಬಹುದೆ ?