ಹರಿಯ ನೆನೆಯಿರೋ ನಮ್ಮ
ಹರಿಯ ನೆನೆಯಿರೊ
ಬರಿದೆ ಮಾತನಾಡಿ ಬಾಯ
ಬರಡು ಮಾಡಿ ಕೆಡಲುಬೇಡಿ
ನಿತ್ಯವಲ್ಲವೀ ಶರೀರವ |
ನಿತ್ಯವೆಂದು ನೋಡಿರಯ್ಯ ||
ಹೊತ್ತು ಕಳೆಯಬೇಡಿ ಕಾಲ ।
ಮೃತ್ಯು ಬಾಹೊದೇಗಲೊ
ಹಾಳು ಹರಟೆ ಮಾಡಿ ಮನವ |
ಬೀಳುಮಾಡಿಕೊಳ್ಳ ಬೇಡಿ ।।
ಏಳುದಿನದ ಕಥೆಯ ಕೇಳಿ |
ಏಳಿರಯ್ಯ ವೈಕುಂಠಕೆ
ಮೆಟ್ಟಿ ಪುಣ್ಯಕ್ಷೇತ್ರಗಳನು |
ಸುಟ್ಟು ಹೋಹುದು ಪಾಪ ಮನ ॥
ಮುಟ್ಟಿ ಭಜಿಸಿರಯ್ಯ ಪುರಂದರ
ವಿಠಲನಾ ಚರಣವನ್ನು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ