ಕೀರ್ತನೆ - 539     
 
ನಗೆಯು ಬರುತಿದೆ-ಎನಗೆ ನಗೆಯು ಬರುತಿದೆ ಜಗದೊಳಿದ್ದ ಮನುಜರೆಲ್ಲ ಹಗರಣ ಮಾಡುವುದ ನೋಡಿ ಪರಸತಿಯರ ಒಲುಮೆಗೊಲಿದು ಹರುಷದಿಂದ ಅವರ ಬೆರೆದು ಹರಿವ ನೀರಿನೊಳಗೆ ಮುಳುಗಿ ಬೆರೆಳನೆಣಿಸುವರ ಕಂಡು ಪತಿಯ ಸೇವೆ ಬಿಟ್ಟು ಪರ ಪತಿಯ ಕೂಡೆ ಸರಸವಾಡಿ ಸತತ ಮೈಯ ತೊಳೆದು ಹಲವು ವ್ರತವ ಮಾಡುವರ ಕಂಡು ಹೀನಗುಣವ ಮನದೊಳಿಟ್ಟು ತಾನು ವಿಷದ ಪುಂಜನಾಗಿ ಮೌನಿ ಪುರಂದರವಿಠಲನ ಧ್ಯಾನ ಮಾಡುವವರ ಕಂಡು