ಕೀರ್ತನೆ - 538     
 
ಧರ್ಮವೇ ಜಯವೆಂಬ ದಿವ್ಯ ಮಂತ್ರ | ಮರ್ಮಗಳನೆತ್ತಿದರೆ ಒಳಿತಲಾ ಕೇಳಿ ವಿಷವನುಣಿಸಿದಗೆ ಷಡುರಸವನುಣಿಸಲುಬೇಕು ! ದ್ವೇಷಮಾಡುವನ ಪೋಷಿಸಲು ಬೇಕು | ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು ! ಅಸು ಹೀರಿದನ ಹೆಸರ ಮಗನಿಗಿಡಬೇಕು ಹಿಂದೆ ನಿಂದಿಸುವರನು ವಂದಿಸುತಲಿರಬೇಕು ! ಬಂಧಿಸಿದವನ ಕೂಡ ಬೆರೆಯಬೇಕು | ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು ಕೊಂದವನ ಗೆಳತನವ ಮಾಡಬೇಕಯ್ಯ ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು | ಕಂಡರಾಗದವರ ತಾ ಕರೆಯಬೇಕು | ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ - | ಖಂಡ ಮಹಿಮೆಯನರಿತು ನೆನೆಯಬೇಕಯ್ಯ