ಕೀರ್ತನೆ - 521     
 
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡು ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ ಒಡಲ ಜಾಗಟೆಯ ಮಾಡಿ ಮಿಡಿವ ಗುಣಿ ನಾಲಗೆಯ ಮಾಡಿ ಒಡನೆ ಢಣ ಢಣ ಢಣ ಢಣ ಎಂದು ಕುಣಿದು ಚಪ್ಪಳಿಕ್ಕುತ ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದು ಕಂತುಪಿತ ಪುರಂದರವಿಠಲ ಪರದೈವವೆಂದು