ಜಾಲಿಯ ಮರದಂತೆ - ದುರ್ಜನರೆಲ್ಲ
ಜಾಲಿಯ ಮರದಂತೆ
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣಿಲ್ಲವೊ
ಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲ
ವಿಷಮರ ದುಸ್ಸಂಗ ಪಡೆದರೇನುಂಟು
ಊರ ಹಂದಿಗೆ ಅಲಂಕಾರವ ಮಾಡಲು
ನಾರುವ ದುರ್ಗಂಧ ಬಿಡಬಲ್ಲುದೆ
ಸಾರ ತತ್ತ್ವಜ್ಞಾನ ಪಾಪಿಗೆ ಹೇಳಲು
ಕ್ರೂರಬುದ್ಧಿಯ ಬಿಟ್ಟು ಸಜ್ಜನನಪ್ಪನೆ ?
ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಣ ಮಾತುಗಳು ಮೊದಲೆ ಇಲ್ಲ
ಪನ್ನಗಶಯನ ಪುರಂದರವಿಠಲನಲ್ಲದೆ
ಅನ್ಯದೈವಂಗಳ ಭಜಿಸದೆ ನರರು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ