ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ ||
ಗೋವಿಂದನ ನಾಮವ ಮರೆಯದಿರಿರೊ
ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು |
ಸಂಭ್ರಮದರಸುಗತೈದು ಮಂದಿ ||
ಡಂಭಕತನದಿಂದ ಕಾಯುವ ಜೀವವ ।
ನಂಬಿ ನೆಚ್ಚಿ ಕೆಡಬೇಡಿ ಕಾಣಿರೊ
ನೆಲೆಯು ಇಲ್ಲದ ಕಾಯ ಎಲವಿನ ಹಂದರವು ।
ಬಲಿದು ಸುತ್ತಿದ ಚರ್ಮದ ಹೊದಿಕೆ ॥
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು |
ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ
ಹರ ಬ್ರಹ್ಮ ಸುರರಿಂದ ವಂದಿತನಾಗಿಪ್ಪ |
ಹರಿಯೇ ಸರ್ವೋತ್ತಮನೆಂದೆನ್ನಿರೊ ||
ಪುರಂದವಿಠಲನ ಸ್ಮರಣೆಯ ಮಾಡಲು |
ದುರಿತ ಭಯಂಗಳ ಪರಿಹರಿಸುವುದು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ