ಕೊಬ್ಬಿನಲಿರಬೇಡವೊ ಏ ನಮ್ಮ ಮನುಜಾ
ಕೊಬ್ಬಿನಲಿರಬೇಡವೊ
ಸಿರಿಬಂದ ಕಾಲಕೆ ಸಿರಿಮದವೆಂಬರು
ಬಿರಿದು ಬಿರಿದು ಮೇಲಕೆ ಮಾಳ್ಪರು
ಸಿರಿಹೋದ ಮರುದಿನ ಬಡತನ ಬಂದರೆ
ಹುರುಕು ಕಜ್ಜಿಯ ತುರಿಸಿ ತಿರುಗುವರಯ್ಯಾ
ಒಡವೆ ವಸ್ತುವನಿಟ್ಟು ಬಡಿವಾರ ಮಾಳ್ಪರು
ನಡೆಯಲಾರೆನೆಂದು ಬಳುಕುವರು
ಸಿಡಿಲು ಎರಗಿದಂತೆ ಬಡತನ ಬಂದರೆ
ಕೊಡವ ಹೊತ್ತುನೀರ ತರುವರಯ್ಯ
ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರು
ಶಾಪಿಸಿಕೊಂಬರು ಬಡವರ ಕೈಲಿ
ಶ್ರೀಪತಿ ಪುರಂದರವಿಠಲನು ಮುನಿದರೆ
ಭೂಪಾರದೊಳಗೆಲ್ಲ ತಿರಿದು ತಿಂಬರಯ್ಯ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ