ಕೀರ್ತನೆ - 465     
 
ಇರಲೇ ಬಾರದು - ಇಂಥಲ್ಲಿ ಇರಲೇಬಾರದು ಇರಬಾರದಿಂದ ................... ವರೆ ಭಯಂಕರ ಹರಿತಾಪರಿಹರಿಸುವ ದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ ಉರಗಗಳು ಸೇರಿಕೊಂಡ ಸದನಗಳಲ್ಲಿ ಕರುಬರಿದ್ದ ಊರುಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿ ಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿ ಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿ ನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿ ಅವನಿಯೊಳಗರ್ಥ ಪ್ರಾಪ್ತಿ ಇಲ್ಲದಂಥಲ್ಲಿ ಮಾನವಲ್ಲದ ಸಭೆಯಲ್ಲಿ ಮಾತ ಕದಿವನ್ಯಾಯದಲ್ಲಿ ನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿ ಶ್ರೀನಾಥ ಶ್ರೀ ಪುರಂದರವಿಠಲ ರೂಪಗಳು ಅನಂತಾನಂತವೆಂದು ಅರಿಯದಅದ್ವೈಷ್ಣವರಲ್ಲಿ