ಇಲ್ಲೇ ವೈಕುಂಠ ಕಾಣಿರೊ
ವಲ್ಲಭನಂಪ್ರಿಯ ನೆರೆನಂಬಿದವರಿಗೆ
ನುಡಿಯೆರಡಾಗದೆ ಕಡುಕೋಪ ಮಾಡದೆ 1
ಬಡತನ ಬಂದರು ಲೆಕ್ಕಿಸದೆ ॥
ಬೆಡಗು ಹೆಣ್ಣುಗಳ ಕಡೆಗಳು ನೋಡದೆ |
ಧೃಡಚಿತ್ತದಲಿ ಶ್ರೀಹರಿಯ ನಂಬಿದವರಿಗೆ
ಪಕ್ಷಪಾತವಿಲ್ಲದನ್ನದಾನಂಗಳನು- |
ಪೇಕ್ಷೆಯ ಮಾಡದೆ ಗುರುಹಿರಿಯರನು ।
ಮೋಕ್ಷವ ಬಯಸುತ ಅನ್ಯಾಯವಳಿಯುತ |
ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ -1
ಪರಹಿತವನು ಮಾಡಿ ಕೆರೆಬಾವಿಗಳ |
ಅರವಟಿಗೆಯ ಸಾಲುಮರವ ಹಾಕಿ ॥
ಸಿರಿಪುರದರಸು ಶ್ರೀ ಪುರಂದರವಿಠಲನ |
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿಹರಿಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ