ಕೀರ್ತನೆ - 364     
 
ಒಂದೇ ಕೂಗಳತೆ ಭೂವೈಕುಂಠ ಸಂದೇಹವಿಲ್ಲವು ಸಾಧು ಸಜ್ಜನರಿಗೆ ಅಂಬರೀಷನು ದ್ವಾದಶಿವ್ರತ ಮಾಡಲು ಡೊಂಬೆಯ ಮಾಡಿದ ದುರ್ವಾಸನು || ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು ಕರಿರಾಜ ವನದಲಿ ಉಳುಹೆಂದು ಕೂಗಲು ತ್ವರಿತದಿಂದಲಿ ಬಂದು ಕಾಯ್ದ ತಾನು || ಕರುಣ ಸಾಗರ ಕೃಷ್ಣ ಕಾಯಬೇಕೆನುತಲೆ ತರಳ ಪ್ರಹ್ಲಾದನ ಕಂಬದಿ ಬಂದುದು ದ್ರುಪದರಾಯನ ಪುತ್ರಿಗಾಪತ್ತು ಬರಲು ಕೃಪೆಯಿಂದಲಕ್ಷಯವಿತ್ತನು || ಕಪಟನಾಟಕ ಕೃಷ್ಣ ಪುರಂದರ ವಿಠಲನ ಗುಪಿತದಿ ನೆನೆವರ ಹೃದಯವೇ ವೈಕುಂಠ