ಕೀರ್ತನೆ - 362     
 
ಏನು ಬೇಡಲಿ ನಿನ್ನ ಹರಿಯೆ ಏನ ಬೇಡಲಿ ನಿನ್ನ ಚಂಚಲ ಕಠಿಣನ | ಮಾನದಿಂದ ಮೋರೆ ಓರೆಮಾಡುವನ ಕರುಳಹರಕನ - ಏನ ಬೇಡಲಿ | ತಿರಿದು ತಿಂಬುವನ ॥ ಕೊರಳಗೊಯ್ಕ ಅರಣ್ಯ ತಿರುಗವನ ಮೊ ಸರು ಬೆಣ್ಣೆ ಕದ್ದು ತಿಂಬವನ 1 ವಾಸಶೂನ್ಯನ ಬೇಡಲೇನು ಕತ್ತಿ ಬೀಸಿ ಸವರುವನ ॥ ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು | ಕೇಸಕ್ಕಿ ಉಂಡುಂಡು ವಾಸಿಸುವನ ಬೇಡಿದರೆ ಕೊಡನ ಮೋರೆನೋಡಿ | ಭಿಡೆಯ ಹಿಡಿಯದವನ । ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ | ಒಡೆಯ ಪುರಂದರವಿಠಲದೊರೆಯ